ವಿಜಯಲಕ್ಷ್ಮೀ ರವೀಂದ್ರನಾಥ್(೧೮ ಅಕ್ಟೋಬರ್ ೧೯೫೩) ರವರೊಬ್ಬ ಭಾರತೀಯ ನರವಿಜ್ಞಾನಿ. ಅವರು ಪ್ರಸ್ತುತವಾಗಿ ಸೆಂಟರ್ ಫಾರ್ ನ್ಯೂರೊಸೈನ್ಸ್ , ಭಾರತೀಯ ವಿಜ್ಞಾನ ಸಂಸ್ಥೆ , ಬೆಂಗಳೂರಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್ ಗುರ್ಗಾಂವ್ ಮತ್ತು ೨೦೦೦ ರಿಂದ ೨೦೦೯ ರವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿನ ಸೆಂಟರ್ ಫಾರ್ ನ್ಯೂರೊ ಸೈನ್ಸ್ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಇವರ ಸಾಧನೆಯನ್ನು ಗುರುತಿಸಿ ಭಾರತದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಲಾಯಿತು. ಅವರು ಮೆದುಳಿನ ಅಸ್ವಸ್ಥತೆಗಳು ಮತ್ತು ಮೆದುಳಿನಲ್ಲಿನ ಡ್ರಗ್ ಮೆಟಬೋಲಿಸಮ್ ನ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ. == ಜನನ == ವಿಜಯಲಕ್ಷ್ಮೀ ರವೀಂದ್ರನಾಥ್ ರವರು ೧೮ ಅಕ್ಟೋಬರ್ ೧೯೫೩ ರಂದು ಚೆನ್ನೈ ನಲ್ಲಿ ಜನಿಸಿದರು. == ಜೀವನ == ವಿಜಯಲಕ್ಷ್ಮೀ ರ ವರ ತಂದೆ - ಕೃಷ್ಣನ್ ರಮನ್ , ತಾಯಿ - ಶಶಿಕಲಾ ರಮನ್. ಅವರು ಡಾ.ಬಿ.ರವೀಂದ್ರನಾಥ್ ರವರನ್ನು ವಿವಾಹವಾದರು. == ಶಿಕ್ಷಣ == ಆಂಧ್ರ ಯುನಿವರ್ಸಿಟಿಯಿಂದ ಬಿ.ಎಸ್ಸಿ. ಮತ್ತು ಎಮ್.ಎಸ್ಸಿ. ಪದವಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ(ಬಯೋಕೆಮಿಸ್ಟ್ರಿ) - ೧೯೮೧. == ವೃತ್ತಿಜೀವನ == ವಿಜಯಲಕ್ಷ್ಮೀ ಯವರು ಪದವಿ ಪಡೆದ ನಂತರ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ , ಯುಎಸ್ಎ ನಲ್ಲಿ ಪೋಸ್ಟ್ ಡಾಕ್ಟೋರಲ್ ಫೇಲೋ ಆಗಿ ಕೆಲಸ ಮಾಡಿದರು . ನಂತರ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊಸೈನ್ಸಸ್ , ಬೆಂಗಳೂರಿಗೆ ಸೇರಿಕೊಂಡರು. ೧೯೯೯ ರಲ್ಲಿ ಅವರು ಭಾರತದ ಸರಕಾರದ ಜೈವಿಕ ತಂತ್ರಜ್ಞಾನ ವಿಭಾಗದ (ಡಿಬಿಟಿ), ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು. == ಮನ್ನಣೆಗಳು == ವಿಜಯಲಕ್ಷ್ಮೀ ಯವರು ಈ ಕೆಳಗಿನ ಭಾರತೀಯ ಅಕಾಡೆಮಿಯಲ್ಲಿ ಚುನಾಯಿತರಾಗಿದ್ದರು. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್. ಭಾರತೀಯ ರಾಷ್ಟ್ರೀಯ ವಿಜ್ಙಾನ ಅಕಾಡೆಮಿ. ನ್ಯಾಷನಲ್ ಅಕಾಡೆಮಿ ಆಫ್ ನ್ಯಾಚುರಲ್ ಸೈನ್ಸಸ್. ಇಂಡಿಯನ್ ಅಕಾಡೆಮಿ ಆಫ್ ನ್ಯೂರೊಸೈನ್ಸ್. == ಪ್ರಶಸ್ತಿಗಳು == ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೧೯೯೬. ಭಾರತೀಯ ರಾಷ್ಟ್ರೀಯ ವಿಜ್ಙಾನ ಅಕಾಡೆಮಿ ಯಿಂದ ಕೆ.ಪಿ.ಭಾರ್ಗವ ಮೆಡಲ್ . ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಓಂ ಪ್ರಕಾಶ್ ಭಸಿನ್ ಪ್ರಶಸ್ತಿ - ೨೦೦೧. ಜೆ.ಸಿ.ಬೋಸ್ ಫೆಲೋಶಿಪ್ - ೨೦೦೬. ಭಾರತೀಯ ರಾಷ್ಟ್ರೀಯ ವಿಜ್ಙಾನ ಅಕಾಡೆಮಿಯಿಂದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೨೦೧೭. ಪದ್ಮಶ್ರೀ ಪ್ರಶಸ್ತಿ - ೨೦೧೦. ಪ್ರೊ.ಕೆ.ಪಿ.ಭಾರ್ಗವ ಸ್ಮರಣಾರ್ಥಕ ಪದಕ - ೨೦೦೦. == ಸಂಶೋಧನಾ ಕ್ಷೇತ್ರಗಳು == ಮೆದುಳಿನ ಅಸ್ವಸ್ಥತೆಗಳು . ಬ್ರೈನ್ ನಲ್ಲಿ ಡ್ರಗ್ ಮೆಟಬೋಲಿಸಮ್( ಚಯಾಪಚಯ ಕ್ರಿಯೆ ). == ಉಲ್ಲೇಖಗಳು ==